ರವಿತೇಜ ನಟನೆಯ ಹೊಸ ಸಿನಿಮಾ ‘ಈಗಲ್’

0

ತೆಲುಗಿನ ಮಾಸ್ ಮಹಾರಾಜ ರವಿತೇಜ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡ್ತಿದ್ದಾರೆ. ಇತ್ತೀಚೆಗೆ ರವಿತೇಜಾ ನಟನೆಯ ಧಮಾಕ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ ಧಮಾಕ ಸಕ್ಸಸ್ ಬೆನ್ನಲ್ಲೇ ಮಾಸ್ ಮಹಾರಾಜ ಮತ್ತೊಮ್ಮೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿದ್ದಾರೆ.

ಇದುವರೆಗೂ ಛಾಯಾಗ್ರಹಕರಾಗಿದ್ದ ಕಾರ್ತಿಕ್ ಕಟ್ಟಿಮನೆ ಇದೇ ಮೊದಲ ಭಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಈಗಾಗಲೇ ಚಿತ್ರಕ್ಕೆ ‘ಈಗಲ್’ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ಸಣ್ಣ ಗ್ಲಿಂಪ್ಸ್ ಮೂಲಕ ಈಗಲ್ ಲೋಕವನ್ನು ಪರಿಚಯ ಮಾಡಿಕೊಡಲಾಗಿದೆ. ರವಿತೇಜ ಮೋಸ್ಟ್ ವಾಂಟೆಡ್‌ ಪೇಂಟರ್ ಆಗಿ, ಹತ್ತಿ ಕೃಷಿನಾಗಿ, ನಾನಾ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗಶಃ ಮಾತ್ರ ಅವರ ಮುಖವನ್ನು ಚಿತ್ರತಂಡ ತೋರಿಸಿ ಸಸ್ಪೆನ್ಸ್ ಕಾಯ್ದುಕೊಂಡಿದೆ.

ಅನುಪಮಾ ಪರಮೇಶ್ವರನ್, ನವದೀಪ್, ಮಧುಬಾಲ, ಕಾವ್ಯ ಥಾಪರ್ ಟೈಟಲ್ ಝಲಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಮಣಿಬಾಬು ಕರಣಂ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದ್ರಾಬಾದ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2024ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ತೆರೆಗೆ ಬರಲಿದೆ.

About Author

Leave a Reply

Your email address will not be published. Required fields are marked *

You may have missed