ಯಶ್ ನಟನೆಯ 19ನೆ ಸಿನಿಮಾಗೆ ಮಲಯಾಳಂ ನಟಿ ನಿರ್ದೇಶನ?

0

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಯಶ್ ನಟನೆಯ ಮುಂದಿನ ಸಿನಿಮಾದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಲಿರುವ ಯಾವ ಚಿತ್ರವೂ ಸಹ ಘೋಷಣೆಯಾಗಿಲ್ಲ. ನಿನ್ನೆಗೆ ( ಏಪ್ರಿಲ್ 14 ) ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡು ಒಂದು ವರ್ಷ ಕಳೆದಿದ್ದು, ಚಿತ್ರದ ಮೊದಲ ವರ್ಷದ ವಾರ್ಷಿಕೋತ್ಸವದ ಆಚರಣೆ ನಡೆದರೂ ಸಹ ಯಶ್ ನಟನೆಯ ಮುಂದಿನ ಚಿತ್ರ ಯಾವುದೆಂಬುದು ಮಾತ್ರ ತಿಳಿದುಬಂದಿಲ್ಲ.

ಯಶ್ ನಟನೆಯ ಮುಂದಿನ ಚಿತ್ರದ ಬಗ್ಗೆ ಹಲವು ದಿನಗಳಿಂದಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇದೆ. ಯಶ್ ತಮ್ಮ ಮುಂದಿನ ಚಿತ್ರವನ್ನು ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರಂತೆ, ತೆಲುಗು ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರಂತೆ, ತಮಿಳಿನ ನಿರ್ದೇಶಕರು ಯಶ್‌ಗೆ ಸಿನಿಮಾ ಮಾಡ್ತಾರಂತೆ, ಯಶ್ ಬಾಲಿವುಡ್‌ಗೆ ಹೋಗ್ತಾರಂತೆ ಎಂಬೆಲ್ಲಾ ಸುದ್ದಿಗಳು ದೊಡ್ಡ ಮಟ್ಟದಲ್ಲಿಯೇ ಹರಿದಾಡಿದ್ದವು.

ಅದೇ ರೀತಿಯ ಮತ್ತೊಂದು ವಿಚಾರ ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಮಲಯಾಳಂ ಚಿತ್ರರಂಗದ ನಿರ್ದೇಶಕಿಯೊಬ್ಬರು ಯಶ್ 19ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಮಲಯಾಳಂ ನಟಿ ಗೀತು ಮೋಹನ್‌ದಾಸ್ ಎಂಬುವವರು ಯಶ್ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟಿಯಾಗಲಿ ಅಥವಾ ಯಶ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಗೀತು ಮೋಹನ್‌ದಾಸ್ ನಿಜವಾದ ಹೆಸರು ಗಾಯತ್ರಿ ದಾಸ್. 1986ರಲ್ಲಿ ತೆರೆಗೆ ಬಂದ ಮೋಹನ್ ಲಾಲ್ ನಟನೆಯ ಒಣ್ಣು ಮುದಲ್ ಪೂಜ್ಯಂ ವರೆ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ 2009ರವರೆಗೂ ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದರು.

ಬಳಿಕ ನಟನೆಯಿಂದ ದೂರವಾಗಿ 2009ರಲ್ಲಿ ‘ಕೇಲ್ಕುನ್ನುಂಡೋ’ ಎಂಬ ಕಿರು ಚಿತ್ರ ನಿರ್ದೇಶನ ಮಾಡಿದ್ದರು ಹಾಗೂ 2013ರಲ್ಲಿ ‘ಲೈಯರ್ಸ್ ಡೈಸ್’ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ಕಥೆ ವಿಚಾರವಾಗಿ, ಕಲಾವಿದರ ನಟನೆ ವಿಚಾರವಾಗಿ ಈ ಚಿತ್ರ ದೊಡ್ಡಮಟ್ಟದ ಪ್ರಶಂಸೆ ಗಿಟ್ಟಿಸಿಕೊಂಡಿತ್ತು.

About Author

Leave a Reply

Your email address will not be published. Required fields are marked *

You may have missed