ಸಮಂತಾ ಕೈಬಿಟ್ಟ ಚಿತ್ರಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ

0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ಬ್ಯೂಟಿಗೆ ದಕ್ಷಿಣದ ಜೊತೆಗೆ ಬಾಲಿವುಡ್ ಚಿತ್ರರಂಗದಲ್ಲೂ ಸಖತ್ ಡಿಮ್ಯಾಂಡ್ ಇದೆ. ಇತ್ತೀಚಿಗೆ ನಿತಿನ್ ಜೊತೆ ಹೊಸ ಒಪ್ಪಿಕೊಂಡ ಬೆನ್ನಲ್ಲೇ ತೆಲುಗಿನ ಮತ್ತೊಂದು ಚಿತ್ರಕ್ಕೆ ನಟಿ ಓಕೆ ಎಂದಿದ್ದಾರೆ.

ಈ ಮೂಲಕ ಸಮಂತಾ ಕೈಬಿಟ್ಟ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

‘ಪುಷ್ಪ’ ಸಿನಿಮಾದ ಸಕ್ಸಸ್ ಬಳಿಕ ನಟಿ ರಶ್ಮಿಕಾಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದೀಗ ತೆಲುಗಿನ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಫೈನಲ್ ಆಗಿದ್ದಾರೆ. ನಟ ದೇವ್‌ ಮೋಹನ್‌- ರಶ್ಮಿಕಾಗೆ ಕ್ಲ್ಯಾಪ್‌ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

`ರೈನ್‌ಬೋ’ ಸಿನಿಮಾದ ಮೂಲಕ ನಟಿ ರಶ್ಮಿಕಾ ಮೊದಲ ಭಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದು, ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಇದನ್ನು ಹುಡುಗಿಯ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದ್ದು, ಈ ಪಾತ್ರವನ್ನು ಜೀವಂತಗೊಳಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಈ ಚಿತ್ರಕ್ಕೆ ಹಿಂದೆ ಸಮಂತಾ ಆಯ್ಕೆಯಾಗಿದ್ದರು. 2021ರಲ್ಲಿಯೇ Dream Warrior Pictures ಸಮಂತಾ ನಾಯಕಿ ಎಂದು ಅನೌನ್ಸ್ ಮಾಡಿದ್ದರು. ಆದರೆ ಅನಾರೋಗ್ಯ ಸಮಸ್ಯೆಯಿಂದ ಈ ಚಿತ್ರವನ್ನ ಸಮಂತಾ ಕೈಬಿಟ್ಟಿದ್ದು, ಸಮಂತಾ ಜಾಗಕ್ಕೆ ನಟಿ ರಶ್ಮಿಕಾ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ.

About Author

Leave a Reply

Your email address will not be published. Required fields are marked *

You may have missed