ವೋಟ್ ಮಾಡಿ ಅಮೆರಿಕಾಗೆ ಹಾರಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

0

2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ನಟ, ನಟಿಯರು ಮತದಾನ ಮಾಡಿದ್ದಾರೆ. ಅದರಂತೆ ನಟ ರಕ್ಷಿತ್ ಶೆಟ್ಟಿ ಕೂಡ ಉಡುಪಿಯಲ್ಲಿ ಮತದಾದನ ಮಾಡಿದ್ದು ಇಂದು ರಾತ್ರಿ ಅಮೆರಿಕಾದ ವಿಮಾನ ಏರಲಿದ್ದಾರೆ. ಮತದಾನ ಮಾಡುವುದಕ್ಕಾಗಿಯೇ ಕಾಯುತ್ತಿದ್ದ ಸಿಂಪಲ್ ಸ್ಟಾರ್, ಮತದಾನದ ಕರ್ತವ್ಯ ಮುಗಿಸಿ ಇಂದು ಯುಎಸ್.ಎಗೆ ಪಯಣ ಬೆಳೆಸುತ್ತಿದ್ದಾರೆ.

ಈ ಮಾಹಿತಿಯನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ.

777 ಚಾರ್ಲಿ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದಕ್ಕೀಗ ಉತ್ತರ ಸಿಕ್ಕಿದ್ದು ಸದ್ಯ ರಕ್ಷಿತ್ ರಿಚರ್ಡ್ ಆಂಟೋನಿ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಮಾಡಲು ಅವರು ಅಮೆರಿಕಾಗೆ ತೆರಳಲಿದ್ದಾರೆ.

ಈಗಾಗಲೇ ಸ್ಕ್ರಿಪ್ಟ್ ಬರೆಯಲು ತೊಡಗಿಕೊಂಡಿರುವ ರಕ್ಷಿತ್, ಅದರ ಅಂತಿಮ ಹಂತದ ಸ್ಕ್ರಿಪ್ಟ್ ಗಾಗಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಾರಂತೆ. ಅಮೆರಿಕಾಗೆ ಹೋಗಲು ತಮ್ಮದೇ ಆದ ಕಾರಣವನ್ನು ನೀಡಿದ್ದಾರೆ ರಕ್ಷಿತ್. ಅಲ್ಲಿ ಹಗಲು ಇದ್ದರೆ, ಇಲ್ಲಿ ರಾತ್ರಿ ಇರುತ್ತದೆ. ಇಲ್ಲಿ ರಾತ್ರಿಯಾದರೆ ಅಲ್ಲಿ ಹಗಲು. ಫೋನ್ ತೊಂದರೆ ಇರುವುದಿಲ್ಲ. ಹಾಗಾಗಿ ಅಮೆರಿಕಾ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ರಕ್ಷಿತ್ ಹೇಳಿದ್ದಾರೆ.

ರಿಚರ್ಡ್ ಆಂಟೋನಿ ಸಿನಿಮಾಗೆ ನಟ ಹಾಗೂ ನಿರ್ದೇಶಕ ಎರಡೂ ರಕ್ಷಿತ್ ಶೆಟ್ಟಿ ಅವರೇ ಆಗಿದ್ದಾರೆ. ಇದು ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೆಲ್ ಸಿನಿಮಾವಾಗಿದೆ. ಹೀಗಾಗಿ ಚಿತ್ರದ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed