ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ: ಮಾಲ್ ಗೆ ನುಗ್ಗಿ 9 ಜನರ ಮೇಲೆ ಏಕಾಏಕಿ ಫೈರಿಂಗ್

0

ಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ರಕ್ತದೋಕುಳಿ ಹರಿಸಿದೆ. ಟೆಕ್ಸಾಸ್‌ನ ಓಟ್ಲೆಟ್ ಮಾಲ್‌ನಲ್ಲಿ ಶನಿವಾರ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಲಿ ನಡೆಸಿ ಎಂಟು ಮಂದಿಯನ್ನು ಕೊಂದು ಹಾಕಿದ್ದಾನೆ. ಬಳಿಕ ಪೊಲೀಸ್ ಅಧಿಕಾರಿಯ ಗುಂಡೇಟಿಗೆ ಆತ ಕೂಡ ಸತ್ತಿದ್ದಾನೆ.

 

ದಲ್ಲಾಸ್‌ನ ಉತ್ತರ ಭಾಗದ ಆಲೆನ್‌ನಲ್ಲಿನ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಆಗಿರುವ ಆಲೆನ್ ಪ್ರೀಮಿಯಂ ಔಟ್‌ಲೆಟ್‌ನಲ್ಲಿ ಕೇಳಿಬಂದ ಗುಂಡಿನ ಸದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ವಾರಾಂತ್ಯವಾಗಿದ್ದರಿಂದ ಈ ಮಾಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 3.30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಅದಕ್ಕೂ ಮುನ್ನ ದಾಳಿಗೆ ಸಂಬಂಧಿಸದ ಬೇರೆ ಕರೆಯೊಂದರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಈ ಮಾಲ್‌ಗೆ ತೆರಳಿದ್ದರು ಎಂದು ಆಲೆನ್ ಪೊಲೀಸ್ ಇಲಾಖೆ ಮುಖ್ಯಸ್ಥ ಬ್ರಿಯಾನ್ ಹಾರ್ವಿ ತಿಳಿಸಿದ್ದಾರೆ.

“ಅವರಿಗೆ ಗುಂಡಿನ ಸದ್ದು ಕೇಳಿಸಿದೆ. ಕೂಡಲೇ ಅವರು ಸದ್ದು ಕೇಳಿಬಂದ ಸ್ಥಳಕ್ಕೆ ಧಾವಿಸಿದ್ದಾರೆ. ಶಂಕಿತನ ಜತೆ ಅವರು ಗುಂಡಿನ ಚಕಮಕಿ ನಡೆಸಿದ್ದಾರೆ. ಆತನನ್ನು ಹತ್ಯೆ ಮಾಡಿದ್ದಾರೆ. ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ” ಎಂದು ಹಾರ್ವಿ ಹೇಳಿದ್ದಾರೆ.

ಬಂದೂಕುಧಾರಿಯು ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಮದ ಭಯಭೀತರಾದ ನೂರಾರು ಅಂಗಡಿ ಮಾಲೀಕರು ಜೀವ ಭಯದಿಂದ ಮಾಲ್‌ನಿಂದ ಹೊರಗೆ ಓಡಿದ್ದಾರೆ. ದಾಳಿಕೋರ ಒಬ್ಬೊಂಟಿಯಾಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಗುಂಡೇಟಿನಿಂದ ಗಾಯಗೊಂಡ ಕನಿಷ್ಠ 9 ಮಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಆಲೆನ್ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಬೋಯ್ಡ್ ತಿಳಿಸಿದ್ದಾರೆ.

ಬಂದೂಕುಧಾರಿಯು ಕಾಲುದಾರಿಯ ಮೂಲಕ ಬಂದು, ಮಾಲ್‌ನ ಹೊರಗೆ ಗುಂಡು ಹಾರಿಸತೊಡಗಿದ. ಆತ ಕಂಡ ಜಾಗದ ಕಡೆಗೆಲ್ಲಾ ಗುಂಡು ಹಾರಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಾಲ್‌ನ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ರಕ್ತ ಸುರಿದಿರುವುದು ಮತ್ತು ಮೃತ ದೇಹಗಳ ಮೇಲೆ ಬಿಳಿ ಹೊದಿಕೆಯನ್ನು ಮುಚ್ಚಿರುವ ದೃಶ್ಯಗಳು ವಿಡಿಯೋಗಳಲ್ಲಿ ಕಾಣಿಸಿವೆ.

About Author

Leave a Reply

Your email address will not be published. Required fields are marked *

You may have missed