ಸದ್ದಿಲ್ಲದೇ ಧ್ರುವ ಸರ್ಜಾ ಜೊತೆ ನಟಿಸಿ ಹೋದ ನಟಿ ಶಿಲ್ಪಾ ಶೆಟ್ಟಿ

0

ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಹೋಗಿದ್ದು, ಅವರ ಮೊದಲ ಹಂತದ ಚಿತ್ರೀಕರಣವನ್ನೂ ಕಂಪ್ಲೀಟ್ ಮಾಡಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿಯನ್ನು ಕೊಡದೇ ಇದ್ದರೂ, ಶಿಲ್ಪಾ ವಾಪಸ್ಸು ಸ್ಯಾಂಡಲ್ ವುಡ್ ಗೆ ಬರುವ ವಿಚಾರವಂತೂ ನಿಜವಾಗಿತ್ತು. ಈಗದು ಪಕ್ಕಾ ಆಗಿದೆ. ಆಗಲೇ ಶಿಲ್ಪಾ ಶೆಟ್ಟಿ ತಮ್ಮ ಭಾಗದ, ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅವರು ಯಾವ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವುದು ತಿಳಿಯಬೇಕಿದೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಿವುಡ್ ಮತ್ತೋರ್ವ ಹೆಸರಾಂತ ನಟ ಸಂಜಯ್ ದತ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಶೂಟಿಂಗ್ ನಲ್ಲಿ ಸಂಜಯ್ ಭಾಗಿಯಾಗಿದ್ದರು. ಆ ವಿಡಿಯೋವನ್ನು ಸ್ವತಃ ಚಿತ್ರತಂಡದವರೇ ಲೀಕ್ ಮಾಡಿದ್ದರು. ಆದರೆ, ಶಿಲ್ಪಾ ಕುರಿತಾದ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಈಗಾಗಲೇ ಕೆಡಿ ಸಿನಿಮಾದ ಮೂರು ಹಂತದ ಚಿತ್ರೀಕರಣವನ್ನು ಪ್ರೇಮ್ ಮುಗಿಸಿದ್ದು, ಇದೊಂದು ಭಾರಿ ಬಜೆಟ್ ಸಿನಿಮಾವಾಗಿದ್ದರಿಂದ ಒಂದಷ್ಟು ಸೆಟ್ ಗಳನ್ನು ಹಾಕಲಾಗುತ್ತಿದೆ. ಅಲ್ಲದೇ, ಭಾರತೀಯ ಸಿನಿಮಾ ರಂಗದ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

About Author

Leave a Reply

Your email address will not be published. Required fields are marked *

You may have missed