ಮಹಾಭಾರತದ ‘ಶಕುನಿ’ ಪಾತ್ರಧಾರಿ ಗೂಫಿ ಪೈಂಟಲ್ ನಿಧನ

0

ಖ್ಯಾತ ಧಾರವಾಹಿ ‘ಮಹಾಭಾರತ’ದಲ್ಲಿ ಶಕುನಿ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ನಟ ಗೂಫಿ ಪೈಂತಲ್ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಹಲವು ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗೂಫಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ವಾರಗಳ ಹಿಂದೆ ಗೂಫಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.

ಅವರ ಸೋದರ ಸಂಬಂಧಿ ಹಿತೇನ್ ಪೈಂತಲ್ ಅವರು ಈ ನೋವಿನ ಸಂಗತಿ ಹಂಚಿಕೊಂಡಿದ್ದಾರೆ. ‘ದುರದೃಷ್ಟವಶಾತ್ ಗೂಫಿ ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು. ಯಾವುದೇ ನೋವಿಲ್ಲದೆ ಅವರು ಮೃತಪಟ್ಟರು’ ಎಂದು ಹಿತೇನ್ ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಗೂಫಿಗೆ ಅನಾರೋಗ್ಯ ಕೈ ಕೊಟ್ಟ ಬಗ್ಗೆ ವರದಿ ಆಗಿತ್ತು. ಅವರು ಆಸ್ಪತ್ರೆಯಿಂದ ಮರಳಿ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸುಳ್ಳಾಗಿದೆ. ಗೂಫಿ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಅವರಿಗೆ ಸಾಕಷ್ಟು ಸಮಯದಿಂದ ಆರೋಗ್ಯ ಸರಿ ಇಲ್ಲ. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಕಳೆದ ಏಳೆಂಟು ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಆರೋಗ್ಯ ಸ್ಥಿರ ಸ್ಥಿತಿಗೆ ಬಂದಿದೆ’ ಎಂದಿದ್ದರು.

ಇದಾದ ಕೆಲವೇ ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ. 1988 ರಿಂದ 1990ವರೆಗೆ ಸುಮಾರು 2 ವರ್ಷಗಳ ಕಾಲ ಮಹಾಭಾರತ ಧಾರಾವಾಹಿ ಡಿಡಿ-1 ರಲ್ಲಿ ಪ್ರಸಾರವಾಗಿತ್ತು. ಜನರ ಮೆಚ್ಚುಗೆ ಗಳಿಸಿದವರಲ್ಲಿ ಶಕುನಿ ಮಾಮ ಪಾತ್ರ ಕೂಡಾ ಒಂದು.

About Author

Leave a Reply

Your email address will not be published. Required fields are marked *

You may have missed