ದುಬೈ ಬಳಿಕ ಉತ್ತರಾಖಂಡ್ ಗೆ ಹಾರಿದ ನಟಿ ದೀಪಿಕಾ ದಾಸ್

0

ಸ್ಯಾಂಡಲ್‌ವುಡ್ ನಟಿ ದೀಪಿಕಾ ದಾಸ್ ಸದ್ಯ ಉತ್ತರಾಖಂಡ್‌ಗೆ ಹಾರಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ದೀಪಿಕಾ ತಮ್ಮ ದುಬೈ ಟ್ರಿಪ್ ಬಳಿಕ ಉತ್ತರಾಖಂಡ್‌ಗೆ ಶೂಟಿಂಗ್‌ಗಾಗಿ ತೆರಳಿದ್ದಾರೆ. ಈ ಕುರಿತ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

`ನಾಗಿಣಿ’ ಧಾರವಾಹಿ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟಿ ದೀಪಿಕಾ ದಾಸ್‌ಗೆ ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ. ಆಗಾಗ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುವ ಮೂಲಕ ಟ್ರಿಪ್ ಏಂಜಾಯ್ ಮಾಡ್ತಿರುತ್ತಾರೆ. ಇತ್ತೀಚಿಗೆ ನಟಿ ದುಬೈಗೆ ಹೋಗಿದ್ದು ಈ ವೇಳೆ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನ ಭೇಟಿಯಾಗಿದ್ದರು. ಇದೀಗ ಉತ್ತರಾಖಂಡ್ ಗೆ ತೆರಳಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ದೀಪಿಕಾ ದಾಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಕಥೆ ಮತ್ತು ಪಾತ್ರಗಳನ್ನ ಮಾಡುತ್ತ ನಟಿ ಉತ್ಸುಕರಾಗಿದ್ದು, ಚಿತ್ರದ ಕುರಿತಾದ ಅಪ್ ಡೇಟ್ ಸದ್ಯದಲ್ಲೇ ಸಿಗಲಿದೆ.

About Author

Leave a Reply

Your email address will not be published. Required fields are marked *

You may have missed