ಶ್ರೀದೇವಿ ಪುಣ್ಯ ತಿಥಿ ಹಿನ್ನೆಲೆ ಚೀನಾದ 6,000 ಪರದೆಗಳಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ರೀರಿಲೀಸ್

0

ಬಾಲಿವುಡ್‌ನ ಖ್ಯಾತ ನಟಿ, ದಿವಂಗತ ಶ್ರೀದೇವಿ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಇಂಗ್ಲಿಷ್ ವಿಂಗ್ಲಿಷ್’ ಮತ್ತೊಮ್ಮೆ ಚೀನಾದಲ್ಲಿ ತೆರೆ ಕಾಣಲು ಸಜ್ಹಾಗಿದೆ.ಶ್ರೀದೇವಿ 5ನೇ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಫೆಬ್ರುವರಿ 24ರಂದು ಚೀನಾದಲ್ಲಿ ಇಂಗ್ಲೀಷ್ ವಿಂಗ್ಲಿಷ್ ಚಿತ್ರ ಬಿಡುಗಡೆ ಆಗಲಿದೆ.

 

ವಿತರಕ ಸಂಸ್ಥೆ ಎರೋಸ್ ಇಂಟರ್‌ನ್ಯಾಷನಲ್ ಪ್ರಕಾರ, ಚಿತ್ರವು ಚೀನಾದ 6,000 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. 2012ರಲ್ಲಿ ತೆರೆ ಕಂಡಿದ್ದ ಇಂಗ್ಲೀಷ್ ವಿಂಗ್ಲಿಷ್ ಸಿನಿಮಾವನ್ನು ಗೌರಿ ಶಿಂದೆ ನಿರ್ದೇಶನ ಮಾಡಿದ್ದರು. ಹಿಂದಿ ಭಾಷೆಯ ಕೌಟುಂಬಿಕ ಕಾಮಿಡಿ ಕಥಾಹಂದರ ಒಳಗೊಂಡಿರುವ ಚಿತ್ರ ಇದಾಗಿದ್ದು, 15 ವರ್ಷಗಳ ಬ್ರೇಕ್ ಬಳಿಕ ನಟಿ ಶ್ರೀದೇವಿ ಈ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದರು.

ಮಸಾಲೆ ಪದಾರ್ಥಗಳ ಉದ್ಯಮ ನಡೆಸುತ್ತಿದ್ದ ತಮ್ಮ ತಾಯಿಯೇ ನಿರ್ದೇಶಕ ಶಿಂದೆಗೆ ಇಂಗ್ಲೀಷ್ ವಿಂಗ್ಲಿಷ್ ಕಥೆ ರೂಪಿಸಲು ಸ್ಫೂರ್ತಿಯಾಗಿದ್ದರು. ವಿಶ್ವದ ಎರಡನೇ ಅತಿದೊಡ್ಡ ಚೀನಾದ ಸ್ಪರ್ಧಾತ್ಮಕ ಚಲನಚಿತ್ರ ಮಾರುಕಟ್ಟೆಯಲ್ಲಿ ಭಾರತದ ಚಿತ್ರಗಳು ಕ್ರಮೇಣ ಬೇಡಿಕೆ ಪಡೆದುಕೊಳ್ಳುತ್ತಿವೆ. ಅದರಲ್ಲೂ ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡ ಚಿತ್ರಗಳು ಮಹತ್ವ ಪಡೆದುಕೊಳ್ಳುತ್ತಿವೆ.

‘ದಿವಂಗತ ನಟಿ ಶ್ರೀದೇವಿಯವರ ಅತ್ಯದ್ಭುತ ಅಭಿನಯ ಇರುವ ಈ ಮಾಸ್ಟರ್ ಪೀಸ್ ಅನ್ನು ಚೀನಾ ಪ್ರೇಕ್ಷಕರ ಮುಂದಿಡಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ’ಎಂದು ಎರೋಸ್ ಇಂಟರ್‌ ನ್ಯಾಷನಲ್ ಸಿಒಒ ಕುಮಾರ್ ಅಹುಜಾ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed