3ನೇ ಮದುವೆಯ ಕುರಿತು ಸ್ಪಷ್ಟನೆ ನೀಡಿದ ಖ್ಯಾತ ನಟಿ ಜಯಸುಧಾ

0

64ನೇ ವಯಸ್ಸಿನಲ್ಲಿ ನಟಿ ಜಯಸುಧಾ 3ನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ದಿನಗಳಿಂದ ತಮಿಳು ಚಿತ್ರೋದ್ಯಮದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮಾಧ್ಯಮಗಳಲ್ಲೂ ಸಾಕಷ್ಟು ಸದ್ದು ಮಾಡಿತ್ತು. ಆದರೂ, ಜಯಸುಧಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ತಮಿಳು ಚಿತ್ರೋದ್ಯಮ ದಾಟಿಕೊಂಡು ಬೇರೆ ಬೇರೆ ರಾಜ್ಯಗಳಲ್ಲೂ ಈ ಸುದ್ದಿ ಹರಡುತ್ತಿದ್ದಂತೆಯೇ ಈ ಕುರಿತು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ತಾವು 3ನೇ ಮದುವೆ ಆಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ನಟಿ ಜಯಸುಧಾ ಜೊತೆ ವ್ಯಕ್ತಿಯೊಬ್ಬರ ಫೋಟೋ ಕೂಡ ಹರಿದಾಡುತ್ತಿತ್ತು. ಆತ ಉದ್ಯಮಿ, ಅವರನ್ನೇ ನಟಿ ಮದುವೆ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲ ಗಾಸಿಪ್ ಗಳಿಗೂ ನಟಿ ತೆರೆ ಎಳೆದಿದ್ದಾರೆ. ತಮ್ಮೊಂದಿಗೆ ಓಡಾಡುತ್ತಿರುವ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ಅವರು ನಟಿ ಜೀವನ ಚರಿತ್ರೆಯನ್ನು ಶೂಟ್ ಮಾಡಲು ಅಮೆರಿಕಾದಿಂದ ಬಂದಿದ್ದಾರಂತೆ. ಹಾಗಾಗಿ ನಟಿ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಜೊತೆ ಜಯಸುಧಾ ಮದುವೆ ಆಗಿದ್ದರು. ಹೊಂದಾಣಿಕೆಯ ಕೊರತೆಯಿಂದಾಗಿ ಈ ಜೋಡಿ ಬೇರ್ಪಟ್ಟಿತ್ತು. ಇದು ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ರಮೇಶ್ ಅವರಿಂದ ವಿಚ್ಚೇದನೆ ಪಡೆದುಕೊಂಡ ನಂತರ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸಹೋದರ ಸಂಬಂಧಿ ನಿತಿನ್ ಕಪೂರ್ ಜೊತೆ ಸಪ್ತಪದಿ ತುಳಿದಿದ್ದರು. ನಿತಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು ಜಯಸುಧಾ ಅವರನ್ನು ಒಂಟಿಯಾಗಿ ಬಿಟ್ಟು ಹೋದರು.

ಇಷ್ಟಪಟ್ಟು ಮದುವೆ ಆಗಿದ್ದ ನಿತಿನ್ ಸಾವಿನ ನಂತರ ಜಯಸುಧಾ ತಮ್ಮ ಮಕ್ಕಳೊಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ಹೊತ್ತಲ್ಲಿ ಉದ್ಯಮಿಯೊಬ್ಬರ ಜೊತೆ ಜಯಸುಧಾ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿತ್ತು. ಹಲವು ಕಾರ್ಯಕ್ರಮಗಳಲ್ಲಿ ಅವರು ಆ ಉದ್ಯಮಿಯೊಂದಿಗೆ ಭಾಗಿಯಾಗಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ನಡೆದ ಆಲಿ ಮಗಳ ಮದುವೆ ಮತ್ತು ವಾರೀಸು ಸಿನಿಮಾದ ಈವೆಂಟ್ ಗೂ ಕೂಡ ಆ ಉದ್ಯಮಿಯನ್ನು ಜಯಸುಧಾ ಕರೆತಂದಿದ್ದರು. ಈಗ ಎಲ್ಲ ಅನುಮಾನಕ್ಕೂ ಜಯಸುಧಾ ಸ್ಪಷ್ಟನೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed