ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್ ಪ್ರಶಸ್ತಿ

0

ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿರುವ ಹಾಗೂ ಗುನೀತ್ ಮೊಂಗಾ ನಿರ್ಮಾಣದ ಭಾರತದ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ (The Elephant Whisperers) ಬೆಸ್ಟ್ ಡಾಕ್ಯುಮೆಂಟ್ ಶಾರ್ಟ್ ಫಿಲಂ ಕೆಟಗರಿಯಲ್ಲಿ ಆಸ್ಕರ್ (Oscar) ಪ್ರಶಸ್ತಿ ಲಭಿಸಿದೆ.

ಈ ಮೂಲಕ ಸಿನಿಮಾ ರಂಗದಲ್ಲಿ ಅತ್ಯುತ್ತಮ ಗೌರವಕ್ಕೆ ಈ ಕಿರುಚಿತ್ರ ಪಾತ್ರವಾಗಿದೆ.ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.

ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ಅನಾಥ ಆನೆ ಮರಿಯ ಕಥೆಯಾಗಿದೆ. ಸ್ಥಳೀಯ ದಂಪತಿ ಬೆಳ್ಳಿ ಹಾಗೂ ಬೊಮ್ಮನ್ ಆರೈಕೆಯಲ್ಲಿ ಆನೆ ಮರಿ ಬೆಳೆಯುವ, ಬಾಂಧವ್ಯವನ್ನು ಸೂಚಿಸುವ ಹಾಗೂ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವ ವಿಷಯಗಳು ಸಿನಿಮಾದಲ್ಲಿದೆ. ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ಜೊತೆಗೆ ಜಾಗತಿಕವಾಗಿ ವೈರ್ ಆಗಿರುವ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಕೂಡಾ ಆಸ್ಕರ್‌ ಲಭಿಸಿದೆ.

About Author

Leave a Reply

Your email address will not be published. Required fields are marked *

You may have missed